Friday, October 23, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ

ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ
ಬೀದರ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ/ಸಾಗಾಣಿಕೆ/ ಗುಳಿಗೆ/ಸಿರಫ್/ಮಾರಾಟ ಮಾಡುತ್ತಿದ್ದವರ ಮೇಲೆ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಜಿಲ್ಲಾದಾದ್ಯಂತ ದಾಖಲಾದ ಒಟ್ಟು 22 ಪ್ರಕರಣಗಳಲ್ಲಿ ಜಪ್ತಿ ಮಾಡಿದ 997 ಕೆ.ಜಿ 764 ಗ್ರಾಂ ಗಾಂಜಾ ಮತ್ತು 51638 Tablets 743 Syrup 2 :: 9,41,64,814=00 ರೂಪಾಯಿ ಮೌಲ್ಯದವುಗಳನ್ನು ನಿಯಮಾನುಸಾರ ಬೀದರ ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷರಾದ ಶ್ರೀ, ಪ್ರದೀಪ್ ಗುಂಟಿ, ಐ.ಪಿ.ಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು ಬೀದರ. ಹಾಗು ಕಮೀಟಿಯ ಸದಸ್ಯರಾದ ಶ್ರೀ, ಬಲ್ಲಪ್ಪ ನಂದಗಾಂವಿ, ಪೊಲೀಸ್‌ ಉಪಾಧೀಕ್ಷಕರು ಭಾಲ್ಕಿ, ಶ್ರೀ, ದೂದ್ ಪೀರ್ ಹೆಚ್. ಮುಲ್ಲಾ ಪೊಲೀಸ್‌ ಉಪಾಧೀಕ್ಷಕರು ಬೀದರ, ಶ್ರೀ ಸಂತೋಷ, ಪರಿಸರ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೀದರ. ಶ್ರೀ, ಬಸವರಾಜ, ವ್ಯವಸ್ಥಾಪಕರು ENVIRO BIOTECH ತ್ಯಾಜ್ಯ ವಿಲೇವಾರಿ ಘಟಕ ಬೀದರ. ರವರ ಸಮಕ್ಷಮ ಭಾಲ್ಕಿ ತಾಲೂಕಿನ ಧನ್ನೂರ ಗ್ರಾಮದಲ್ಲಿರುವ ಇನ್ವೇರೋ ಬಯೋಟಿಕ್ ಜೈವಿಕ ತ್ಯಾಜ್ಯ ವಿಲೆವಾರಿ ಘಟಕದ ಕುಲುಮೆಯಲ್ಲಿ ನಾಶ ಪಡಿಸಲಾಯಿತು.