Saturday, October 24, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ಜಿಲ್ಲೆಯಾದ್ಯಂತ ದಲಿತರ ಮೇಲಾಗುತ್ತಿರುವ ನಿರಂತರ ದೌರ್ಜನ್ಯಗಳನ್ನು ಖಂಡಿಸಿ

ಜಿಲ್ಲೆಯಾದ್ಯಂತ ದಲಿತರ ಮೇಲಾಗುತ್ತಿರುವ ನಿರಂತರ ದೌರ್ಜನ್ಯಗಳನ್ನು ಖಂಡಿಸಿ


ನಮ್ಮ ಭಾರತ ದೇಶ ಸ್ವಾತಂತ್ರ್ಯ ಪಡೆದು 80 ವರ್ಷಗಳು ಗತಿಸಿವೆ. ಮತ್ತು ಸಂವಿಧಾನ ಜಾರಿಯಾಗಿ ದೇಶ ಗಣರಾಜ್ಯವಾಗಿ 76 ವರ್ಷಗಳು ಕಳೆದಿವೆ. ಭಾರತೀಯ ಸಂವಿಧಾನದಲ್ಲಿ ದೇಶದ ಎಲ್ಲಾ ಜಾತಿ ಜನಾಂಗಳಿಗೆ ಸಂವಿಧಾನಾತ್ಮಕ ತತ್ವಗಳಡಿ ಸಾಮಾಜಿಕ ನ್ಯಾಯ ಒದಗಿಸಲಾಗಿದೆ ಹಾಗೂ ನಮ್ಮ ಭಾರತೀಯ ಸಂವಿಧಾನದಲ್ಲಿ “ಸಮಾನತೆ, ಸ್ವಾತಂತ್ರ್ಯ ನ್ಯಾಯ, ಘನತೆ,” ಗಳೊಂದಿಗೆ ಬದುಕುವ ಹಕ್ಕು ದೇಶದ ಪ್ರತಿಯೋಬ್ಬ ನಾಗರಿಕರ ಸಂವಿಧಾನಾತ್ಮಕ ಹಕ್ಕಾಗಿದೆ. ಭಾರತದ ಸಂವಿಧಾನವು "ಜಾತಿ, ಧರ್ಮ, ಲಿಂಗ ಭಾಷೆ ಅಥವಾ ಜನ್ಮ ಸ್ಥಳದ ಆಧಾರದ ಮೇಲೆ ಯಾವುದೇ ನಾಗರಿಕರಿಗೆ ಅನ್ಯಾಯವಾಗದಂತೆ ಸಮಾನತೆ ಮತ್ತು ನ್ಯಾಯದ ಭರವಸೆ ನೀಡಿದೆ. ದಲಿತರ ಮೇಲೆ ನಡೆಯುವ ಜಾತಿ ಆಧಾರಿತ ದೌರ್ಜನ್ಯವು ಕೇವಲ ಸಾಮಾಜಿಕ ಅನ್ಯಾಯವಲ್ಲ. ಅದು ಸಂವಿಧಾನದ ಮೂಲಭೂತ ಮೌಲ್ಯಗಳ ಮೇಲಿನ ದಾಳಿಯಾಗಿದೆ. ಹೀಗಿರುವಾಗ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಇಡೀ ರಾಜ್ಯದ್ಯಂತ ಪ್ರತಿನಿತ್ಯ ಬೆಳಗಾಗುವಷತ್ವಲಿ ಸಾಲು ಸಾಲು ದಲಿತರ ಮೇಲೆ ನಿರಂತರ ಅನ್ಯಾಯ, ಅತ್ಯಾಚಾರ, ಕೊಲೆ, ಸುಲಿಗೆ, ಬೇದರಿಕೆ, ಅಸ್ಪೃಶ್ಯತೆ ಆಚರಣೆಗಳಂತಹ ಸಾಮಾಜಿಕ ನ್ಯಾಯದ ವಿರುದ್ಧವಾದ ದುರ್ಘಟನೆಗಳು ನಡೆಯುತ್ತಲೆ ಇವೆ. ಅದರಂತೆ ರಾಜ್ಯದ ಬೀದರ ಜಿಲ್ಲೆಯಾದ್ಯಂತ ಪ್ರತಿನಿತ್ಯ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ಸಾಲುಸಾಲಾಗಿ ನಡೆಯುತ್ತಲೆ ಇವೆ. ನಿರಂತರ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರು ಸಹ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಅದರ ಗಂಭೀರತೆಯನ್ನು ಅರಿಯದೆ ಇರುವುದರಿಂದ ದಿನನಿತ್ಯ ದುರ್ಘಟನೆಗಳು ಚಾಲ್ತಿಯಲ್ಲಿವೆ. ಈ ಗಂಭೀರ ಘಟನೆಗಳ ಬಗ್ಗೆ ಸ್ವಾಭಿಮಾನಿ ಹೋರಾಟಗಾರರು ಧ್ವನಿ ಎತ್ತಿದ್ದಾಗ ಪೊಲೀಸ ಅಧಿಕಾರಿಗಳು ಆಡಳಿತ ವೈಫಲ್ಯವನ್ನು ಮುಚ್ಚಿಡುವ ನಿಟ್ಟಿನಲ್ಲಿ ಹೋರಾಟಗಾರರನ್ನು ಗುರಿಯಾಗಿಸಿ, ಹೋರಾಟಗಾರರ ಮೇಲೆ ಸುಳ್ಳು ಪೊಲೀಸ ಪ್ರಕರಣಗಳು ದಾಖಲಿಸಿ ಹೋರಾಟಗಾರರ ಧ್ವನಿಯನ್ನು ಇಡೀ ಜಿಲ್ಲೆಯಾದ್ಯಂತ ಹತ್ತಿಕುವ ಹುನ್ನಾರ ನಡೆಸಿರುತ್ತಾರೆ.

ಆದ್ದುದ್ದರಿಂದ ಜಿಲ್ಲೆಯಾದ್ಯಂತ ದಲಿತರ ಮೇಲಾಗುತ್ತಿರುವ ನಿರಂತರ ದೌರ್ಜನ್ಯಗಳನ್ನು ಖಂಡಿಸಿ, ದಲಿತರ ಹಕ್ಕೊತ್ತಾಯಗಳಿಗೆ ಒತ್ತಾಯಿಸಿ ಬೃಹತ ಪ್ರತಿಭಟನಾ ಮೇರವಣಿಗೆ ಹಮ್ಮಿಕೊಂಡಿದ್ದು, ಈ ಬೃಹತ ಪ್ರತಿಭಟನಾ ಮೇರವಣಿಗೆಯಲ್ಲಿ ಬೀದರ ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ ಅನುಯಾಯಿಗಳು, ದಲಿತ ಮತ್ತು ಪ್ರಗತಿಪರ ಚಿಂತಕರು, ಬುದ್ಧಿ ಜೀವಿಗಳು, ವಿದ್ಯಾರ್ಥಿಗಳು, ಕಾರ್ಮಿಕರು, ಸಾಮಾಜಿಕ ಕಾರ್ಯಕರ್ತರು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೀಮ ವಿನಂತಿ