Thursday, October 22, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ಸಿಡಿಲು ಬಡಿದು ಮೃತಪಟ್ಟ ಜರ್ನಪ್ಪ ಕುಟುಂಬಕ್ಕೆ ಕುರುಬರ ರಾಮಣ್ಣ ಸಾಂತ್ವನ

ಸಿಡಿಲು ಬಡಿದು ಮೃತಪಟ್ಟ ಜರ್ನಪ್ಪ ಕುಟುಂಬಕ್ಕೆ ಕುರುಬರ ರಾಮಣ್ಣ ಸಾಂತ್ವನ


ಬೀದರ್: ಜಿಲ್ಲೆಯ ಉಡಬನಳ್ಳಿ ಗ್ರಾಮದ ನಿವಾಸಿ ಜರ್ನಪ್ಪ ತಂದೆ ರೇವಣಪ್ಪ ಅವರು ಸಿಡಿಲು ಬಡಿದು ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ಕುಟುಂಬದವರ ಮನೆಗೆ ಭೇಟಿ ನೀಡಿದ ಬಿ.ಕೆ. ಹರಿಪ್ರಸಾದ್ ಅವರ ಅಪ್ಪಟ ಶಿಷ್ಯ ಹಾಗೂ ಕಾಂಗ್ರೆಸ್ ಮುಖಂಡ ಕುರುಬರ ರಾಮಣ್ಣ ಅವರು ಕುಟುಂಬಸ್ಥರಿಗೆ ಸಾಂತ್ವನ ಹಾಗೂ ಧೈರ್ಯ ಹೇಳಿದರು.

ರಾಮಣ್ಣ ಅವರಿಗೆ ಆ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರು ಇದ್ದರೂ, ಅದನ್ನು ಲೆಕ್ಕಿಸದೆ ಜರ್ನಪ್ಪ ಅವರ ಕುಟುಂಬದ ಮನೆಗೆ ತೆರಳಿ, ಕುಟುಂಬದವರೊಂದಿಗೆ ಸ್ವಲ್ಪ ಸಮಯ ಕಳೆದು, ದುಃಖದಲ್ಲಿ ಭಾಗಿಯಾದರು. ಮೃತ ಜರ್ನಪ್ಪ ಅವರ ಕುಟುಂಬದಲ್ಲಿ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ.

ಸಿಡಿಲು ಬಡಿದು ಜರ್ನಪ್ಪ ಮೃತಪಟ್ಟ ಘಟನೆ ಬಳಿಕ, ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಬೀದರ್ ದಕ್ಷಿಣ ಕ್ಷೇತ್ರದ ಹಾಲಿ ಶಾಸಕರಾಗಲಿ ಅಥವಾ ಮಾಜಿ ಶಾಸಕರಾಗಲಿ ಯಾರೂ ಆಗಮಿಸಿಲ್ಲ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರ ತಿಳಿದ ಬಳಿಕ ಕುರುಬರ ರಾಮಣ್ಣ ಅವರು ಕುಟುಂಬದ ಮನೆಗೆ ತೆರಳಿ, ಮೃತರ ಕುಟುಂಬದವರ ದುಃಖದಲ್ಲಿ ಭಾಗಿಯಾಗಿ, ಅವರಿಗೆ ಧೈರ್ಯ ತುಂಬಿದ್ದಾರೆ.

ಆರೋಗ್ಯದಲ್ಲಿ ಏರುಪೇರು ಇದ್ದರೂ ಮಾನವೀಯತೆಯ ದೃಷ್ಟಿಯಿಂದ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ರಾಮಣ್ಣ ಅವರ ನಡೆ ಸ್ಥಳೀಯರ ಗಮನ ಸೆಳೆದಿದೆ.

ವರದಿ: ವಿಶ್ವ ಗಾಯಕವಾಡ, ಬೀದರ್