ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಕೇಂದ್ರ ಸಂಘ ಬೆಂಗಳೂರು ಇವರಿಂದ ಹಮ್ಮಿಕೊಂಡಿದ್ದ ಮುಷ್ಕರದಲ್ಲಿ ಆರೋಗ್ಯ ಇಲಾಖೆಯ ಬೇನ್ನೆಲುಬಾದ ಆರೋಗ್ಯ ನಿರೀಕ್ಷಣಾಧಿಕಾರಿಗಳ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳ ಬಗ್ಗೆ ಮಾಧ್ಯಮಗಳ ಮುಂದೆ ಹಗುರವಾಗಿ ಮಾತನಾಡಿದ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದಿಂದ ಮಾಧ್ಯಮದ ಎದುರಿಗೆ ಬಂದು ಕ್ಷಮೆ ಯಾಚಿಸಬೇಕೆಂದು ಬೀದರ ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳ ಸಂಘ ಆಗ್ರಹಿಸಿ ಇಂದು ಮಾನ್ಯ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಇವರಿಗೆ ಮಾನ್ಯ ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಅನಿಲಕುಮಾರ ಚಿಂತಾಮಣಿ ಇವರ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಬೀದರ ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀ ಸುನಿಲ ಕಸ್ತೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ವಿವೇಕ ಸ್ವಾಮಿ ,ಖಜಾಂಚಿ ಶ್ರೀ ಅಲಿಮೋದ್ದಿನ್ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಶೀಮತಿ ಶಕುಂತಲಾ ದಂಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ವಿಜಯಲಕ್ಷ್ಮೀ ಧಮಲಾ ಖಜಾಂಚಿ ಜರೀನಾ ಬೆಗಂ ಹಾಗೂ ಸಂಘದ ಪದಾಧಿಕಾರಿಗಳಾದ ಪಾರ್ವತಿ ಸೊನಾರೆ,ಬಸಮ್ಮ,ರೇಣುಕಾ,ಸೂಲೋಚನಾ,ವಿಲಸನ್ ಸಾಲೋಮನ್,
ವಿದ್ಯಾಸಾಗರ ,ಸಂಗಮೇಶ ರೆಡ್ಡಿ, ಶಿವಪ್ಪ ಗುಮ್ಮಾ ಭೂಷಣ, ವಿರಶೆಟ್ಟಿ ಚನ್ನಶೆಟ್ಟಿ,ಶಿವಾನಂದ ಸ್ವಾಮಿ, ಜಾವೇದ್ ಕಲ್ಯಾಣಕ ತಾಲೂಕಾ ಅಧ್ಯಕ್ಷರಾದ ಶ್ರೀ ರಫಿಯೋದ್ದಿನ್,ವಿಲಸನ್,ಕೇದಾರನಾಥ,ವಹೀದ್ ಪರವೆಜ್ , ಹಾಗೂ ಸಂಘದ ಪ್ರಮುಖರು ಹಾಗೂ ಜಿಲ್ಲೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಹಾಜರಿದ್ದರು.
ದಾರಿ