Sunday, October 25, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ಕುಪೇಂದ್ರ ಇನ್ನಿಲ್ಲ* *ಪತ್ರಕರ್ತ ಕುಪೇಂದ್ರ ಅವರಿಗೆ ವಿವಿಧ ಪತ್ರಕರ್ತರಿಂದ ಮತ್ತು ವಿವಿಧ ನಾಯಕರಿಂದ ಶ್ರದ್ಧಾಂಜಲಿ

ಕುಪೇಂದ್ರ ಇನ್ನಿಲ್ಲ* *ಪತ್ರಕರ್ತ ಕುಪೇಂದ್ರ ಅವರಿಗೆ ವಿವಿಧ ಪತ್ರಕರ್ತರಿಂದ ಮತ್ತು ವಿವಿಧ ನಾಯಕರಿಂದ ಶ್ರದ್ಧಾಂಜಲಿ
 ಬೀದರ ಇತಿಹಾಸ ಎಂಬ ಸುದ್ದಿ ಮಾಧ್ಯಮದ ಪತ್ರಕರ್ತ ಹಾಗೂ ಬೀದರ್ ನ ಪತ್ರಕರ್ತರ ಸಹೋದ್ಯೋಗಿ ಮತ್ತು ಎಲ್ಲರ ಆತ್ಮೀಯ ಗೆಳೆಯ ಸೋಹದರ ಕುಪೇಂದ್ರ ಅವರು ಹ್ರದಯಘಾತದಿಂದ ಇಂದು ಇಹಲೋಕ ತ್ಯಜಿಸಿದ್ದಾರೆ, ನಮ್ಮನು ಬಿಟ್ಟು ಅಗಲಿದಾರೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂದವರಿಗೆ ದುಃಖ ಭರಿಸುವ ಶಕ್ತಿ ಆ ಭಗವಂತ ಕರುಣಿಸಲಿ ಎಂದು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಬೀದರ್ ನಗರದ ಅಂಬೇಡ್ಕರ್ ವ್ರತ್ತದ ಬಳಿ ವಿವಿಧ ಪತ್ರಕರ್ತರು ಮತ್ತು ಸಂಘಟನೆಗಳ ಹಾಗೂ ರಾಜಕೀಯ ಪಕ್ಷಗಳ ನಾಯಕರುಗಳಿಂದ ಸಲ್ಲಿಸಲಾಯಿತು.ಇದೇ ವೇಳೆ ಬಿಎಸ್ಪಿಯ ಜಿಲ್ಲಾ ಸಂಯೋಜಕರಾದ ರಾಜಕುಮಾರ್ ಮೂಲಭಾರತಿ, ಜಿಲ್ಲಾ ಅಧ್ಯಕ್ಷ ಕಪೀಲ್ ಗೋಡಬೊಲೆ,ಜಾಫರ್ ಖುರೇಶಿ,RPIಅಧ್ಯಕ್ಷ ಮಹೇಶ್ ಗೋರನಾಳಕರ್,ಕಾಂಗ್ರೆಸ್ ಮುಖಂಡ ಚಂದ್ರಕಾಂತ ನಿರಾಟೆ,ಮುಖಂಡರಾದ ರವಿ ಚಾಂಬೋಳ, ಶಿವಕುಮಾರ್ ತುಂಗಾ,ನರ್ಸಿಂಗ್ ಮಿರಾಗಂಜ್,ಪತ್ರಕರ್ತರಾದ ತುಕಾರಾಂ ಗೌರೆ, ವಿಶ್ವನಾಥ್ ಗಾಯಕವಾಡ,ಎಂ ಪಿ ಮುಧಾಳೆ, ರವಿ ಭುಸಂಡೆ,ನರ್ಸಿಂಗ್ ಸಾಮ್ರಾಟ್, ಉಪಸ್ಥಿತರಿದ್ದರು.