ಸಿದ್ದಾರ್ಥ ಬುದ್ಧ ವಿಹಾರ ಮತ್ತು ವಿಶ್ವ ಜ್ಞಾನಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಭವನ ಅಭಿವೃದ್ಧಿ ಸಮಿತಿ, ಬೀದರ ಇವರ ವತಿಯಿಂದ ಆಯೋಜಿಸಲಾದ ಗೌತಮ ಬುದ್ಧ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ವಿಚಾರ ಸಂಕೀರ್ಣ ಮತ್ತು ಧಮ್ಮ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವ ಅವಕಾಶ ದೊರಕಿದ್ದು ಸಂತಸದ ವಿಷಯ.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬುದ್ಧ ಧರ್ಮದ ಮೌಲ್ಯಗಳನ್ನು ಆಧಾರವಿಟ್ಟು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವೀಯತೆಯ ಸಮಾಜ ನಿರ್ಮಾಣಕ್ಕೆ ಮಹತ್ವದ ದಾರಿದೀಪರಾದವರು.
ಇವರಿಬ್ಬರ ಆದರ್ಶಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶನ ನೀಡುತ್ತಿದ್ದು, ಶಾಂತಿ, ಸಹೋದರತ್ವ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕೆ ನಾವು ಎಲ್ಲರೂ ಬದ್ಧರಾಗಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದೆ.
ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ರಹೀಮ್ ಖಾನ್ ಪೌರಾಡಳಿತ ಮತ್ತು ಹಜ್ ಸಚಿವರು ರ್ನಾಟಕ ಸರ್ಕಾರ ಬೀದರ್
ದಾರಿ