ಗಡಿ ಜಿಲ್ಲೆ ಬೀದರ್‌ನ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮುಂಭಾಗದ ದೃಶ್ಯ. ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕಾದ ಈ ಆಸ್ಪತ್ರೆಯ ಮುಖ್ಯ ದ್ವಾರವೇ ಇಂದು ಸಾರ್ವಜನಿಕರ ಪಾಲಿಗೆ ನರಕವಾಗಿ ಮಾರ್ಪಟ್ಟಿದೆ!
ಮಳೆಯಾದರೂ ಸಾಕು, ಈ ಮುಖ್ಯ ಗೇಟ್ ಬಳಿ ಅಡಿಗಟ್ಟಲೆ ನೀರು ನಿಲ್ಲುತ್ತದೆ. ಇಲ್ಲಿ ಬಿದ್ದಿರುವ ಈ ಬೃಹತ್ ತಗ್ಗಿನಿಂದಾಗಿ ಆಂಬುಲೆನ್ಸ್‌ಗಳು ಬರಲು ಪರದಾಡುತ್ತಿವೆ. ಗರ್ಭಿಣಿಯರು, ವೃದ್ಧರು ಮತ್ತು ತುರ್ತು ಚಿಕಿತ್ಸೆಗೆ ಬರುವ ರೋಗಿಗಳು ಈ ಕೆಸರು ನೀರಿನಲ್ಲೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದಾರೆಯೇ?
"ಸ್ವಚ್ಛ ಭಾರತ್ ಬಗ್ಗೆ ಮಾತನಾಡುವ ಆಡಳಿತ ಮಂಡಳಿ, ಆಸ್ಪತ್ರೆಯ ಗೇಟ್ ಮುಂದಿರುವ ಈ ಅವ್ಯವಸ್ಥೆಯನ್ನು ಸರಿಪಡಿಸಲು ಯಾಕೆ ಮುಂದಾಗುತ್ತಿಲ್ಲ? ಇಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚಿ, ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುವುದೇ ಅಥವಾ ದೊಡ್ಡ ಅನಾಹುತಕ್ಕೆ ಕಾಯುತ್ತಿದೆಯೇ? ಕಾದು ನೋಡಬೇಕಿದೆ.
ದಾರಿ