ಕನ್ನಡಿಗರ ರಕ್ಷಣೆ ವೇದಿಕೆ ವತಿಯಿಂದ, ಇಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ಬೀದರ ಇವರಿಗೆ
ಮನವಿ ಸಲ್ಲಿಸಲಾಯಿತು
ಪದ್ಮಾವತಿ, ಯುವ ಸಬಲೀಕರಣ ಕ್ರೀಡಾ ಇಲಾಖೆ, ಬೀದರನಲ್ಲಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಬೀದರ ಜಿಲ್ಲೆಯ ಮುಂಬಡ್ತಿ ಪಡೆದು, ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸದರಿಯವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿರುವ ಪ್ರಯುಕ್ತ, ತಾವು ಸದರಿ ಅಧಿಕಾರಿ ವಿರುದ್ಧ ತನಿಖೆ ಆದೇಶಿಸಿರುತ್ತೀರಿ. ಸದರಿ ತನಿಖೆಗೆ ಸಂಬಂಧದಲ್ಲಿ ಶ್ರೀಮತಿ ಪದ್ಮಾವತಿ ಅಧೀಕ್ಷಕರಿಗೆ ಅಮಾನತ್ತು ಮಾಡದೇ, ತನಿಖೆ ಮಾಡಲಾಗಿರುತ್ತದೆ.
ಈ ತನಿಖೆಯ ಸಮಯದಲ್ಲಿ ಸದರಿಯವರು ಕರ್ತವ್ಯದಲ್ಲಿ ಇದ್ದುದರಿಂದ ಕಡತಗಳನ್ನು ತಿರುಚಿರುವ ಹಾಗೂ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ತನಿಖೆಯ ಸಂಬಂಧದಲ್ಲಿ ದಾಖಲೆಗಳನ್ನು ಹಾಜರುಪಡಿಸುವ ಸಂಭವ ಇರುತ್ತದೆ. ಆದ್ದರಿಂದ 2023 ರಿಂದ ಇಲ್ಲಿಯವರೆಗೆ ಸದರಿಯವರ ಅವಧಿಯಲ್ಲಿ ನಡೆದಿರುವ ಎಲ್ಲಾ ವ್ಯವಹಾರಗಳ ಖರ್ಚು ವೆಚ್ಚದ ಉನ್ನತ ಮಟ್ಟದ ತನಿಖೆ ನಡೆಸುವುದು ಅತೀ ಅವಶ್ಯಕವಾಗಿದೆ.
ಅಲ್ಲದೇ ಕ್ರೀಡಾ ಇಲಾಖೆಗೆ ಭೇಟಿ ನೀಡುವ ಕ್ರೀಡಾಪಟುಗಳಿಗೆ ಮತ್ತು ಯುವಕ ಯುವತಿ ಸಂಘಗಳಿಗೆ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಪಡೆಯಲು ಭೇಟಿ ನೀಡಿದಾಗ ಅನುಚಿತವಾಗಿ ವರ್ತಿಸುತ್ತಾ, ಸರಿಯಾಗಿ ಸ್ಪಂದಿಸುವುದಿಲ್ಲ. ತಮ್ಮ ಮನಸ್ಸು ಇಚ್ಛೆಯಂತೆ ಕ್ರೀಡೆ ಸಾಮಗ್ರಿಗಳು ಹಾಗೂ ಸಂಗೀತ ಸಾಮಗ್ರಿಗಳು ವಿತರಿಸುತ್ತಿದ್ದಾರೆ.
ಶ್ರೀಮತಿ ಪದ್ಮಾವತಿ ಅಧೀಕ್ಷಕರು ಇವರು ಇಲಾಖೆಯಲ್ಲಿ ಜಾತಿವಾದ ಮಾಡುತ್ತಾ, ಪರಿಶಿಷ್ಟ ಜಾತಿ ಜನರಿಗೆ ಕೀಳು ಪದಗಳಿಂದ ಮಾತನಾಡುತ್ತಾ, ಅನುಚಿತವಾಗಿ ವರ್ತಿಸುತ್ತಾ, ಅಸಭ್ಯವಾಗಿ ವರ್ತಿಸುತ್ತಿದ್ದಾರೆ.
ಪ್ರಯುಕ್ತ ಸದರಿಯವರ ವಿರುದ್ಧ ಈ ಮುಕ್ತವಾಗಿರುವ ತನಿಖೆ ಸರಿಯಾಗಿ ಆಗದೇ ಇರುವುದರಿಂದ ಇನ್ನೊಮ್ಮೆ ಸದರಿಯವರ ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕು
ಒಂದು ವೇಳೆ ತಾವು ಶ್ರೀಮತಿ ಪದ್ಮಾವತಿ ಅಧೀಕ್ಷಕರು ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು
ಕನ್ನಡಿಗರ ರಕ್ಷಣಾ ವೇದಿಕೆಯಿಂದ ಆಗ್ರಹ ಮಾಡಲಾಯಿತು.
ಈ ಸಂದರ್ಭದಲ್ಲಿ ಕನ್ನಡಿಗರ ರಕ್ಷಣಾ ವೇದಿಕೆಯ ರಾಘವೇಂದ್ರ ಡಿಎಸ್, ರಾಜ್ಯ ಪ್ರಭಾರ ಸಮಿತಿ ಉಪಾಧ್ಯಕ್ಷರು
ಆನಂದ್ ಡೋಮಲ್ ವಿಭಾಗೀಯ ಉಪಾಧ್ಯಕ್ಷರು, ಶ್ರೀಕಾಂತ್ ಭವಾನಿ ಜಿಲ್ಲಾಧ್ಯಕ್ಷರು ಬೀದರ್.
ಅಭಿಷೇಕ್ ನಗರ ಅಧ್ಯಕ್ಷರು, ಸುಜಿತ್ ಕುಮಾರ್ ನಗರ ಕಾರ್ಮಿಕ ಅಧ್ಯಕ್ಷರು, ಮಾಣಿಕ್ ಮೇತ್ರಿ ಸಹ ಕಾರ್ಯದರ್ಶಿ
ಅಮರ್ ನಗರಧ್ಯಕ್ಷರು
ದಾರಿ