Friday, October 23, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ಧಮ್ಮ ದೀಪ ಕಾರ್ಯಕ್ರಮ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ,,,,,, ವಿದ್ಯಾರ್ಥಿಗಳು ಓದು ಮತ್ತು ಬರಹಕ್ಕೆ ಹೆಚ್ಚು ಮಹತ್ವ ನೀಡಬೇಕು

ಧಮ್ಮ ದೀಪ ಕಾರ್ಯಕ್ರಮ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ,,,,,, ವಿದ್ಯಾರ್ಥಿಗಳು ಓದು ಮತ್ತು ಬರಹಕ್ಕೆ ಹೆಚ್ಚು ಮಹತ್ವ ನೀಡಬೇಕು


ಬೀದರ್ ನಗರದಲ್ಲಿ, ದಿನಾಂಕ 24-04-2026 ರಂದು ಎಲ್,ಐ,ಸಿ ಬಡಾವಣೆಯ "ಫುಲೆ ನಿವಾಸದ" ಆವರಣದಲ್ಲಿ,ಸಾಯಂಕಾಲ 5 ಗಂಟೆಯ ರಂದು,ಮಹಾತ್ಮ ಜ್ಯೋತಿಬಾ ಫುಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆ ವತಿಯಿಂದ ಆಯೋಜಿಸಿದ ಡಾ,ಬಿ, ಆರ್,ಅಂಬೇಡ್ಕರ್ ಅವರ 135 ನೇ ಜಯಂತೋತ್ಸವದ  ಅಂಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು, ಸ್ಪರ್ಧೆಯ ಪ್ರಥಮ ಬಹುಮಾನ ಶ್ರೀ ಪೀಟರ್ ತಂದೆ ಸಂಜು ಕುಮಾರ್, ಹಾಗೂ ದ್ವಿತೀಯ ಬಹುಮಾನ ಐಶ್ವರ್ಯ ತಂದೆ ರಮೇಶ್ ಕುಮಾರ್ ಮತ್ತು ತೃತೀಯ ಬಹುಮಾನ ಸುಜ್ಞಾನಿ ತಂದೆ ಅನಿಲ್ ಕುಮಾರ್ ಮತ್ತು  ಶ್ರೀ,ಶ್ರೇಯಸ್ ತಂದೆ ಶರಣಬಸಪ್ಪ ಫುಲೆ, ಈ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಧಮ್ಮ ದೀಪ ಕಾರ್ಯಕ್ರವು ಕೂಡ ಆಯೋಜನೆ ಮಾಡಲಾಗಿತ್ತು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಭಂತೆ ಸಂಘರಕೀತ ಅವರು , ವಹಿಸಿಕೊಂಡಿದ್ದರು ಮತ್ತು ಈ ಕಾರ್ಯಕ್ರವು ಡಾ. ಕಾಶಿನಾಥ್ ಚಲ್ವಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು, ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಶ್ರೀ ವಿಠ್ಠಲ್ ದಾಸ್ ಪ್ಯಾಗೆ ಅವರು ಮತ್ತು ಶ್ರೀ ಮಲ್ಲಶೆಟ್ಟಿ ಚಿದ್ರೆ ತಹಶೀಲ್ದಾರರು (ಚುನಾವಣೆ ಆಯೋಗ ) ಹಾಗೂ ಯುವ ಮುಖಂಡರಾದ ಶ್ರೀ ಮಹೇಶ್ ಗೊರನಾಳಕರ್ ಅವರು ಉಪಸ್ಥಿತರಿದ್ದರು, ಎಂದು ಶ್ರೀ ಶರಣು ಫುಲೆ ಸಾಹಿತಿಗಳು ಮತ್ತು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ