, ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಬೆಳಕುಣಿ (ಬಿ) ಗ್ರಾಮದ ಅಪ್ರಾಪ್ತ ಶೋಭಾ ತಂದೆ ಸಂತೋಷ ರನಾಡೆ ಎಂಬ ದಲಿತ ಯುವತಿಯನ್ನು ದಿನಾಂಕ: 08-05-2026 ರಂದು ಲಖನ್ ಬಾಬುರಾವ ಎಂಬ ವ್ಯಕ್ತಿಯು ಸದರಿ ಅಪ್ರಾಪ್ತ ಯುವತಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಘಟನೆ ನಡೆದಿರುತ್ತದೆ. ಈ ಸಂಬಂಧವಾಗಿ ಆ ವ್ಯಕ್ತಿಗೆ ಗಲ್ಲು ಶಿಕ್ಷೆಯಾಗಬೇಕು ಮತ್ತು ಅಪ್ರಾಪ್ತ ದಲಿತ ಬಾಲಕಿಯ ಕುಟುಂಬಕ್ಕೆ ಕೂಡಲೇ ಸಹಾಯಧನ ಪರಿಹಾರ ಕೊಡಬೇಕು ಮತ್ತು ಬಾಲಕಿ ಕ್ರೀಡಾಪಟು ಇದ್ದು, ಕಾರಣ ಅವರ ಕುಟುಂಬಕ್ಕೆ ಸರ್ಕಾರದಿಂದ ಒಬ್ಬ ವ್ಯಕ್ತಿಗೆ ಸರ್ಕಾರಿ ನೌಕರಿ ಕೊಡಬೇಕೆಂದು ಸರ್ಕಾರಕ್ಕೆ ಮನವಿ. ಮಾಡಿದ ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಾಮಾಜಿಕ ಪರಿವರ್ತನಾ ಸಂಘದಿಂದ ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು
ಒಂದು ವೇಳೆ ತಾವು ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು, ಮುಂದೆ ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳಬೇಕು, ಮುಂದಿನ ಆಗು ಹೋಗುಗಳಿಗೆ ತಾವು ಮತ್ತು ಜಿಲ್ಲಾಡಳಿತವೇ ನೇರ ಹೊಣೆಗಾರರೆಂದು ತಮ್ಮ ಗಮನಕ್ಕೆ ತರಲಾಗುತ್ತಿದೆ.
ದಾರಿ